ನೇಸರನಿಲ್ಲದ ಊರಿನಲಿ
ಚಂದ್ರಬಿಂಬದ ತೇರಿನೊಳು,
ಚುಕ್ಕಿ ತಾರೆಗಳ ಮೆರವಣಿಗೆ
ಸಾಗಿದೆ ಒಲವಿನ ಕಡೆಗೆ...
ಬಾನು ಇಲ್ಲಿ ಬಾಗಿದೆ
ಮೇಘಗಳು ತುಸು ನಾಚಿವೆ,
ಒಲವಿನ ಈ ಮೆರವಣಿಗೆಗೆ
ನಿಂತಲ್ಲೇ ತೋರಣವಾಗಿವೆ...
ಆಗಸವು ಖುಷಿಯಲಿ ಮಿಂದಿದೆ
ಮಿಂಚು ನಗುವಾಗಿ ಕಂಡಿದೆ,
ಬಾನಿನ ಈ ಹೊಸ ರೂಪಕೆ
ಇಳೆಯು ಸಾಕ್ಷಿಯಾದಂತಿದೆ...
ನೇಸರ ಮೂಡುವ ಹೊತ್ತಿಗೆ
ಹೊಸದಾದ ಶಕೆಯು ಶುರುವಾಗಿದೆ,
ಭಾನು ಭುವಿಯ ನಡುವೆಯೇ
ಪ್ರೇಮಲೋಕವೇ ತೇಲಿ ನಿಂತಿದೆ...
No comments:
Post a Comment