31 December, 2021

ವಸಂತಗೀತೆ...

ಮರೆಯಾದ ನೆನಪುಗಳ
ಮತ್ತೆ ಹುಡುಕಬೇಕು,
ಕಾಲ ಸರಿಯುತಿರಲು
ನಾಳೆಗೆ ಪಾಠ ಹೇಳಬೇಕು...

ಕಾಡುವ ಕನಸುಗಳ
ಕೂಡಿ ಹಾಕಬೇಕು,
ಒಂದಷ್ಟು ದಿನಗಳು
ಒಲವಿನಲಿ ತೇಲಬೇಕು...

ಮನದ ಭಾವಗಳಿಗೆ
ಮೌನದ ಭಾಷೆಯಾಗಬೇಕು,
ಹಾಡೊಂದು ಮೂಡಬೇಕು
ಆತ್ಮದ ಸಾಹಿತ್ಯದಂತೆ...

ಉರುಳೋ ಕಾಲವಿಲ್ಲಿ
ಓಡೋಡಿ ಸಾಗುತಿಹುದು,
ಮತ್ತೆ ಮತ್ತೆಯಿಲ್ಲಿ 
ಮಳೆಬಿಲ್ಲು ಮೂಡಬೇಕು...

ಪ್ರೀತಿ ಚಿಗುರಬೇಕು
ನಿತ್ಯ ವಸಂತದಂತೆ,
ಜೀವ ನಗುತಿರಬೇಕು
ಬದುಕು ಅನಂತವೆಂಬಂತೆ...

No comments:

Post a Comment