ನಿನ್ನೆಯ ನೋವುಗಳೇ
ನಾಳೆಗೆ ಪಾಠಗಳು,
ಒಲವಿನ ಸಾಲುಗಳೇ
ಸ್ಪೂರ್ತಿಯ ಚಿಲುಮೆಗಳು...
ಕಾಲವು ಬರೆದಂತೆ
ಬದುಕಿನ ನಿಯಮಗಳು,
ಬೇಸರವಾದರೂ ಇಲ್ಲಿ
ನಗುನಗುತಾ ನಡಿಬೇಕು...
ಕನಸಿನ ಅರಮನೆಗೆ
ಇಲ್ಲಿ ನೆನಪಿನ ದೀವಿಗೆಯೂ,
ಮರೆವಿನ ಜೊತೆಯಲ್ಲೇ
ಅಳುವೂ ಇಹುದಿಲ್ಲಿ...
ಬದುಕಿನ ಸಾಲುಗಳ
ಇಲ್ಲಿ ನಾವುಗಳೇ ಬರಿಬೇಕು,
ವಿಧಿ ಬರೆದ ಭಾಗ್ಯಗಳ
ಬದಲಾಯಿಸಿ ವಿಧಾತರಾಗಬೇಕು...
No comments:
Post a Comment