15 March, 2022

ಮೌನಮುಖಿ...

ಪ್ರೀತಿಸು ಮನಸೇ
ಬದುಕು ಪರಿತಪಿಸದಂತೆ,
ಬಾಳು ಓ ಜೀವವೇ
ಪಶ್ಚಾತಾಪವೂ ಇಲ್ಲದಂತೆ...

ನಡೆಯೋ ಕಾಲುಗಳೇ
ಎಡವೋದು ಇಲ್ಲಿ,
ನಗುವಾ ಮಂದಿಯ ನೋಡಿ
ಅಳಬೇಕು ಯಾಕೆ...

ನಗುವಿಗೂ ಅಳುವಿಗೂ
ಹೆಚ್ಚೇನೂ ಅಂತರವಿಲ್ಲ,
ಕಣ್ಣೀರು ಸುರಿಸೋದು ಕಣ್ಣಾದರೂ
ಮರುಗೋದು ಮಾತ್ರ ಮನಸಲ್ಲವೇ...

ಮೂರು ದಿನದ ಪಯಣ
ಕೋಪ ತಾಪವೇಕೆ,
ನಗುನಗುತಾ ಬಾಳಬೇಕು
ಬದುಕು ಬವಣೆಯಾಗದಂತೆ...

2 comments: