31 March, 2022

ಮರುಳು ಮನಸು...

ಮರೆವಿನ ಮರೆಯಲ್ಲಿ
ಪ್ರೀತಿಯು ಇಹುದಿಲ್ಲಿ,
ಅರಿವಿನ ನೆರಳೊಳಗೆ
ಬದುಕಲಿ ಖುಷಿಯೂ ಇಹುದಿಲ್ಲಿ...

ತಾಳ್ಮೆಯ ಹಾದಿಯಲಿ
ಮನಸು ಅರಳಿಹುದು,
ನೋವಿನ ಅಗ್ನಿಯಲಿ
ಬದುಕು ಹದವಾಗಿಹುದು...

ಶಾಂತಿಯು ಜೊತೆಯಿರಲು
ಆತ್ಮವೂ ನಗುತಿಹುದಿಲ್ಲಿ,
ಸತ್ಯದ ಹಾದಿಯಲಿ
ನಾಳೆಗಳ ಬೆಳಕಿಹುದು...

ಸಹನೆಯ ಕಟ್ಟೆಯೊಳು
ತುಂಬಿದೆ ಪ್ರೀತಿಯ ಪನ್ನೀರು,
ನ್ಯಾಯ ಅನ್ಯಾಯಗಳ ತಕ್ಕಡಿಲಿ
ಬದುಕು ತೂಗಿಹುದು...

No comments:

Post a Comment