ಮರೆಯೋದು ಕೂಡ ವರವಂತೆ ಇಲ್ಲಿ
ಆಸೆಗಳ ಮರೆತು ಬದುಕನ್ನು ನೋಡು,
ಮರೆವಿನ ಮರೆಯಲ್ಲೇ ಬದುಕು ಅರಳುವುದು
ಮರೆವಿನ ನೆರಳಲ್ಲೇ ಕನಸದು ಚಿಗುರುವುದು...
ಬದುಕಲಿ ಕೋಪವ ಮರೆತಾಗ
ಮನದೊಳು ಪ್ರೀತಿಯು ಅರಳುವುದು,
ಜಗದೊಳು ದ್ವೇಷವು ಮರೆತಾಗ
ಸಂಬಂಧಗಳು ನಗುತಾವು...
ಮನಸು ಕೊರಗುವುದ ಮರೆತಾಗ
ನಮ್ಮಯ ನಾಳೆಗಳು ನಗುತಾವ,
ಮನುಜ ಇಲ್ಲಿ ಚಿಂತೆಯ ಮರೆತಾಗ
ಹೃದಯವು ಖುಷಿಯಲಿ ಮೀಯುವುದು...
ಬದುಕಲಿ ನೋವನು ಮರೆತಾಗ
ನಾಳಿನ ದಾರಿಯು ಕಾಣುವುದು,
ನಿನ್ನೆಗಳ ಕತ್ತಲೆಯಾ ಮರೆತಾಗ
ಭರವಸೆಯ ಸೂರ್ಯನು ಉದಯಿಸುವಾ...
No comments:
Post a Comment