29 August, 2022

ಖಾಲಿ ಹಾಳೆಯ ಮೇಲೆ...

ಯಾರೋ ಗೀಚಿದ ಸಾಲು ಇಲ್ಲಿ
ಇನ್ಯಾರದೋ ಬದುಕು ಅಲ್ಲಿ,
ಯಾರೋ ಬರೆದ ಯುಗಳ ಗೀತೆ
ಇನ್ಯಾರಿಗೋ ವಿರಹ ಗೀತೆ ಇಲ್ಲಿ...

ಯಾರೋ ಬರೆದ ಕಥೆಯಾ ಸಾಲು
ಇನ್ಯಾರದೋ ಬದುಕಿನ ವ್ಯಥೆಯೋ,
ಯಾರೋ ಕಾಣೋ ಕನಸು ಇಲ್ಲಿ
ಎಷ್ಟೋ ಜನರ ಹಗಲುಗನಸೋ...

ಸಣ್ಣ ನಗುವಿನ ಆಚೆಯೆಲ್ಲೋ
ನೂರು ನೋವಿನ ಪರದೆ ಇಹುದು,
ಪ್ರೀತಿ ಪ್ರೇಮದ ಹಾಡಿನೊಳಗೂ
ನೂರು ವಿರಹದ ಸಾಲು ಇಹುದು...

ಸ್ನೇಹ ಎಂಬ ಅಮೃತದೊಳಗೂ
ಅಪನಂಬಿಕೆಯ ಹಾಲಾಹಲವಿಹುದು,
ಹಾಳೆ ಮೇಲೆ ಬರೆದಂತಲ್ಲಾ ಬದುಕು
ಹುಡುಕಬೇಕಿದೆ ನಮ್ಮೊಳಗೆ ನಮ್ಮನ್ನೇ...

No comments:

Post a Comment