13 October, 2022

ಬದುಕಿನ ಕಥೆ...

ಅರಳಿ ನಗುವಾ ಹೂವುಗಳಿಲ್ಲಿ
ಜೀವನ ಪ್ರೀತಿಯ ತೋರಿಸಿವೆ,
ಬಾಡಿ ಹೋದ ಮೊಗ್ಗುಗಳಿಲ್ಲಿ
ಬದುಕಿನ ಬವಣೆಯ ಸೂಸುತಿವೆ...

ಉದುರಿ ಬೀಳುವ ಎಲೆಗಳಿಲ್ಲಿ
ಜೀವನ ಸತ್ಯವ ಬೋಧಿಸಿವೆ,
ಸುಯ್ಯನೆ ಬೀಸುವ ಗಾಳಿಯು ಕೂಡ
ತಾಳ್ಮೆಯ ಪಾಠವ ಹೇಳುತಿದೆ...

ಸಾಗರ ಸೇರೋ ನೀರದು ಕೂಡ
ತನ್ನಿರುವಿನ ಮಹಿಮೆಯ ಸಾರುತಿದೆ,
ಮುಗಿಲೆತ್ತರ ಚಾಚಿದ ಗಿರಿಶಿಖರಗಳಿಲ್ಲಿ
ಸ್ವಾಭಿಮಾನದ ಕತೆಯ ಹೇಳುತಿವೆ...

ಕೈಗೆ ಎಟುಕದ ಅನಂತ ಆಗಸ ಕೂಡ
ಅವಕಾಶಗಳ ಅರಿವನು ನೀಡುತಿದೆ,
ಸುರಸುಂದರಿಯಂತ ಪ್ರಕೃತಿಯೀಗ
ಸೃಷ್ಠಿಯಲಿ ಬದುಕಿನ ಕತೆಯಾ ಹೇಳುತಿದೆ...

No comments:

Post a Comment