ಮನದ ಮಡಿಲಿದು
ಖುಷಿಯಿಂದ ತುಂಬಲು,
ಬದುಕ ಹೊಲದಲಿ
ಪ್ರತಿದಿನವೂ ಸುಗ್ಗಿಯೂ...
ಮನದ ಅಂಗಳದಿ
ಒಲುಮೆಯ ಪಟ ಹಾರುತಿರಲು,
ಬದುಕ ಬನದಲಿ
ಪ್ರತಿನಿತ್ಯ ಜಾತ್ರೆಯೂ...
ಬಯಸಿದಾ ಬದುಕು
ನಡೆಯುತ್ತಿರಲು ಹಿತವಾಗಿ,
ಲೋಕಕ್ಕೆಲ್ಲಾ ಸಡಗರವಂತೆ
ಕಬ್ಬಿನಜಲ್ಲೆಯ ರಸ ಸವಿದಂತೆ...
ನಗುವಿಲ್ಲಿ ಶೃಂಗಾರ ಆತ್ಮಕ್ಕೆ
ತೃಪ್ತಿಯೇ ಬಂಗಾರ ಬದುಕೀಗೆ,
ಒಲುಮೆಯ ಎಳ್ಳನು ಬೀರುತ್ತಾ
ಬದುಕಿಲ್ಲಿ ಸಂಕ್ರಾಂತಿ ಪ್ರತಿನಿತ್ಯ...
No comments:
Post a Comment