31 December, 2022

ವಿದಾಯ...

ನಿನ್ನೆಗಳು ಕಾಲಗರ್ಭವ ಸೇರಿವೆ
ಒಂದಷ್ಟು ನೆನಪುಗಳ ಹೊತ್ತು,
ಬದುಕು ವಿದಾಯ ಹೇಳಿದೆ
ಕಾಡುವ ನೆನಪುಗಳ ಜಾತ್ರೆಗೆ...

ನಾಳೆಗಳು ಹರುಷದಿ ನಗುತಿವೆ
ಹೊಸ ಕನಸಿನ ಸೊಗಸಿಗೆ,
ಬದುಕಿಲ್ಲಿ ಸ್ವಾಗತ ಕೋರಿದೆ
ಒಂದಷ್ಟು ನಲಿವಿನ ಯಾತ್ರೆಗೆ...

ಪ್ರತಿ ಅಂತ್ಯವೂ ಆರಂಭವಿಲ್ಲಿ
ಸೃಷ್ಠಿಯಾ ಕಥೆಯೊಳಗೆ,
ಪ್ರತಿ ಆರಂಭಕೂ ಅಂತ್ಯವಿದೆಯಿಲ್ಲಿ
ಈ ಲೋಕದಾ ಚರಿತ್ರೆಯಲಿ...

ಬದುಕಿನಾ ಬವಣೆಗೂ ಭಾಗ್ಯಕ್ಕೂ 
ವಿದಾಯವ ಹೇಳಲೇಬೇಕು,
ಓಡುವಾ ಕಾಲವನ್ನು ಜೀವನ ಚಕ್ರವನ್ನೂ
ಸ್ವಾಗತಿಸುತ ಮುಂದೆ ಸಾಗಬೇಕು...

No comments:

Post a Comment