ನೀನು ಕಾಲದ ಕವಿತೆ
ಬದುಕಲಿ ಮರೆಯದೇ ಉಳಿದೆ,
ನೀನು ಕನಸಿನ ಕವಿತೆ
ಮನಸಲಿ ಅಳಿಯದೆ ಕುಳಿತೆ...
ಮೌನದ ಮಾತಾಗಿ ಕಲೆತೆ
ಭಾವದ ಸೊಗಡಾಗಿ ಕುಳಿತೆ,
ತುಟಿಯಂಚಲಿ ನಗುವಾಗಿ ಬೆರೆತೆ
ಕಣ್ಣಂಚಲಿ ಕನಸಾಗಿ ನಿಂತೆ...
ಸ್ನೇಹದ ಸೆಲೆಯಾಗಿ ಬೆಳೆದೆ
ಪ್ರೀತಿಯ ಗುರುವಾಗಿ ಮೆರೆದೆ,
ಭರವಸೆಯ ಬೆಳಕಾಗಿ ಹರಿದೆ
ಪರಿಧಿಗಳ ಗೆರೆಯನೇ ಮರೆತೆ...
ನೆನಪೇ ನೀನೊಂದು ಸುಂದರ ಕವಿತೆ
ಸ್ಮೃತಿ ನೀನು ನಾನೆಂಬ ಮೋಹಕೆ,
ನೀನಿಲ್ಲದ ಬದುಕೊಂದು ಬದುಕೇ
ನೀನೆಂದರೆ ಅದು ಬದುಕಿಗೆ ಹೊದಿಕೆ...
No comments:
Post a Comment