ಮುನಿಸು ಮರೆತರೆ ಮನಸು ಚೆಂದವೋ
ಮೌನ ಅರಿತರೆ ಹೃದಯ ಚೆಂದವೋ,
ಭಾವದೊಳಗಿನ ಮೊರೆತ ಅಂದವೋ
ಬದುಕ ಕಾಡುವ ಕನಸು ಚಂದವೋ...
ಪ್ರೀತಿ ಬೆರೆತರೆ ಸ್ನೇಹ ಚೆಂದವೋ
ತ್ಯಾಗ ಮೆರೆದರೆ ಪ್ರೀತಿ ಅಂದವೋ,
ಮನಸ ಬೆಸೆಯುವಾ ಬಂಧ ಚೆಂದವೋ
ಸಂಬಂಧಗಳ ಸರಿಗಮದಿ ಬದುಕೇ ಆನಂದ...
ಆಸೆ ಮರೆತರೆ ಬದುಕಿಗೆ ಆನಂದ
ನೋವು ಮರೆತರೆ ಮನಸಿಗಾನಂದ,
ನಗುವು ಬೆರೆತರೆ ನಾಳೆಗೆ ಆನಂದ
ಕಹಿಯ ಮರೆತರೆ ಬದುಕು ಪರಮಾನಂದ...
ಭರವಸೆಯ ನೆರಳು ಅಂದವೋ
ನಾಳೆಗಳ ಕನಸು ಚಂದವೋ,
ಒಲವ ಜೋಕಾಲಿಯೊಳಗೆ
ಮನಸು ಜೀಕುವಾಗ ಬದುಕಿಗಾನಂದವೋ...
No comments:
Post a Comment