30 March, 2023

ಕರ್ಮವೆಂಬ ಛಾಯೆ...

ಬದುಕಿನ ಓಟಕೂ
ಕರ್ಮದ ಲಗಾಮಿದೆ,
ಮೆರೆಯುವ ಜೀವಕೇ
ಮರೆಯದ ಏಟಿದೆ...

ಕರ್ಮದ ಹೊಡೆತವು
ಬದುಕಿಗೆ ಪಾಠವೂ,
ನಾಳೆಯ ಪಯಣಕೆ
ವಿಧಿಯೇ ನಕಾಶೆಯೂ...

ಅರಿಯದೆ ಆಡಿದ
ಮಾತಿಗೆ ಕ್ಷಮೆಯಿದೆ,
ಮರೆತು ಮಾಡಿದಾ ತಪ್ಪಿಗೂ
ಕರ್ಮದ ಫಲವಿದೆ...

ಕರ್ಮದ ಛಾಯೆಯೂ
ಆವರಿಸಿದೆ ಬದುಕನೇ,
ನಿನ್ನೆಗಳ ಕರ್ಮವೂ
ನಾಳೆಗಳ ಬೆನ್ನ ಏರಿದೆ...

No comments:

Post a Comment