ಬದುಕು ಲೋಕದ ಲೆಕ್ಕಾಚಾರ
ಕೂಡಿ ಕಳೆಯುವ ಹಂಬಲದೀ,
ಕಾಲ ಕರ್ಮದ ಲೆಕ್ಕಾಚಾರ
ಗುಣಿಸಿ ಭಾಗಿಸೋ ವರಸೆಯಲಿ...
ಶೂನ್ಯದೊಂದಿಗೆ ಶುರುವು ಇಲ್ಲಿ
ಕೂಡಿ ಕಳೆಯುವ ಬದುಕಿದು,
ಗುಣಿಸಿ ಭಾಗಿಸಿ ಉಳಿದರಿಲ್ಲಿ
ಅದುವೇ ಪುಣ್ಯದ ಶೇಷವೂ...
ಶೇಷವಿಲ್ಲಿ ಶೂನ್ಯವಾದರೆ
ಬದುಕು ಇಲ್ಲಿ ಶೂನ್ಯದಂತೆ,
ಕೆಟ್ಟ ಕರ್ಮದಾ ಫಲವದು
ಬದುಕು ಪಾಪದ ಹೊರೆಯೂ...
ಬದುಕಿನಾ ಲೆಕ್ಕಾಚಾರವೂ
ಪಾಪ ಪುಣ್ಯದ ಕತೆಯದು,
ವಿಧಿಯು ಬರೆದಾ ಬರಹಕೆ
ಕರ್ಮವೆಂಬ ಲೆಕ್ಕಾಚಾರವೂ...
No comments:
Post a Comment