27 June, 2023

ಬೆಳದಿಂಗಳು...

ಕೊಟ್ಟದನ್ನೇ ಪಡೆಯಬೇಕು ಇಲ್ಲಿ
ಉತ್ತಿದ್ದೇ ಬೆಳೆ ಬೆಳೆಯುವಂತೆ,
ನೋವು ಕೊಟ್ಟ ಮೇಲೆ ಇಲ್ಲಿ
ನಲಿವು ಬರೀಯ ಕನಸು ಅಷ್ಟೇ...

ನಗುವ ಹಂಚಿ ನಗುತ ಬಾಳಿ
ನೆಮ್ಮದಿಯನು ಪಡೆಯಬಹುದು,
ಚಿಂತೆಯೆಂಬ ಮೂಟೆ ಹೊರಲು
ಬದುಕು ಇಲ್ಲಿ ಬಲು ಭಾರವೂ...

ಸೋತ ಬದುಕನು ಗೆಲ್ಲಬಹುದು
ನಿನ್ನೆಗಳು ಕೂಡ ನಾಚುವಂತೆ,
ಗೆಲುವು ಕೂಡ ಬಾಗಬಹುದು
ಭರವಸೆಯ ನಾಳೆಗಳಿಗೆ...

ನಿರೀಕ್ಷೆಗಳು ಮುಗಿಯಬಹುದು
ಬದುಕ ಬನದ ಹಾದಿಯಲ್ಲಿ,
ಮೂಡಬಹುದು ಬೆಳದಿಂಗಳಿಲ್ಲಿ
ಕತ್ತಲ ದಾರಿಯ ಪಯಣದಲಿ...

No comments:

Post a Comment