14 August, 2023

ನುಡಿ ನಮನ...

ಜಯತು ಜಯತು ತಾಯಿ ಭಾರತಿ
ನಿನಗೆ ಪ್ರೀತಿಯ ಆರತಿ,
ಸಿಂಧು ಗಂಗೆ ಯಮುನೆಯಿಂದ
ಪ್ರತಿನಿತ್ಯ ನಿನಗೆ ಅಭಿಷೇಕವೂ...

ಹಿಮಾಲಯವೇ ಮುಕುಟಮಾಲೆ
ಹಿಮವೇ ನಿನ್ನ ಮುಕುಟ ರತ್ನವೂ,
ಮಹಾ ಸಾಗರವೇ ಪಾದ ತೊಳೆಯುತಿರಲು
ಪರಮ ಪುನೀತೆ ನೀನು ಭಾರತಿ...

ಭರತನನ್ನು ಪಡೆದ ಪುಣ್ಯಗರ್ಭ ನಿನ್ನದು
ರಾಮ ಕೃಷ್ಣ ಬುದ್ಧ ಮಹಾವೀರರ ಜನ್ಮದಾತೆ ಭಾರತಿ,
ವೀರಪುತ್ರರಿಗೆ ಜನ್ಮವಿತ್ತ ವೀರಮಾತೆಗೆ ವಂದನೆ
ಭುವಿಯ ಬೆಳಗೊ ಪುಣ್ಯವಂತೆ ನೀನೇ ವಸುಂಧರೇ...

ವೇದಗಳಿಗೆ ತೊಟ್ಟಿಲಾದೆ ನೀನು
ಅರಳಿದವು ನಿನ್ನ ಮಡಿಲೊಳು ಮಹಾಕಾವ್ಯಗಳು,
ಜಗಕೆ ಜ್ಞಾನ ಹಂಚಿ ನೀನಾದೆ ಜ್ಞಾನವಿಶಾರದೇ
ಶಾಂತಿಯಿಂದ ಕ್ರಾಂತಿ ಮಾಡಿ ಗುರುವು ನೀ ವಿಶ್ವಕೆ...

No comments:

Post a Comment