30 July, 2023

ಗೆಳೆಯಾ...

ಇರಬೇಕು ಒಂದು ಬಂಧವಿಲ್ಲಿ
ನಗುವಿನಲು ಅಳುವಿನಲು ಬಂಧುವಾಗಿ,
ಅಳುವಿನೊಳು ಕಣ್ಣೊರೆಸೋ ಅಣ್ಣನಂತೆ
ನಗುವಿನೊಳು ಮುದ್ದಾಡೋ ಮಗುವಿನಂತೆ...

ಇರಬೇಕು ಬದುಕಿನೊಳು ಹೆಗಲೊಂದು
ಬಸವಳಿಯೆ ತುಸು ತಲೆಯಿಡಲು,
ಮುಂಗುರುಳ ಸವರುವ ಕೈಯೊಂದು
ಪ್ರೀತಿ ತೋರುವ ಹೃದಯ ಜಗದೊಳು...

ಇರಬೇಕು ಕೈಯೊಳಗೆ ಕೈಯೊಂದು
ಹುಸಿ ಕೋಪ ತೋರುತ್ತಾ ಗುದ್ದಾಡಲು,
ಎಡವಿ ಬಿದ್ದಾಗ ಬದುಕ ಪಯಣದೊಳು
ಹಿಡಿದೆತ್ತಿ ನಿಲ್ಲಿಸುವ ಜೊತೆಯೊಂದು...

ಇರಬೇಕು ಹಂಗಿಲ್ಲದ ಜೀವವೊಂದು
ಕಣ್ಣಲ್ಲಿ ಕಣ್ಣಿಡುವ ಭಾವವೊಂದು,
ಜೊತೆಯಲಿರಬೇಕು ಆತ್ಮಸಾಕ್ಷಿಯಂತೆ
ಲೋಕದೊಳು ಮತ್ತೊಂದು ಆತ್ಮದಂತೆ...

No comments:

Post a Comment