14 October, 2023

ಬಣ್ಣ...

ಬದುಕಿನ ಪುಟಗಳಿಗೆ 
ಚಂದದ ಬಣ್ಣಗಳ ತುಂಬಬೇಕು,
ನಿನ್ನೆಯಾ ಕಹಿಗಳಿಂದ 
ಕಪ್ಪು ಬಣ್ಣವ ತಗೋಬೇಕು...

ಮನಸಿನ ಖಾಲಿ ಹಾಳೆಯಲಿ
ಚಿತ್ತಾರವ ಬರಿಬೇಕು,
ನಾಳೆಗಳ ಖುಷಿಯಿಂದ
ಬಿಳಿ ಬಣ್ಣವ ಪಡಿಬೇಕು...

ಬಾನಿನ ಬಳಿಯಿಂದ
ನೀಲ ವರ್ಣವ ಕದಿಯಬೇಕು,
ಅನಂತ ಅವಕಾಶದ ಬದುಕಿನೊಳು
ನೀಲ ಮೇಘಗಳ  ಕರೆಯಬೇಕು...

ಸೃಷ್ಟಿಯ ಮಡಿಲಿಂದ
ಹಸಿರು ಬಣ್ಣವ ಪಡಿಬೇಕು,
ಬಾಡಿಹೋದ ಭಾವಗಳಿಗೆ
ಜೀವವ ತುಂಬಬೇಕು...

No comments:

Post a Comment