ಅರಳುವ ಮೊಗ್ಗಿನೊಳು
ಮಗುವಿನ ನಗುವು ಇದೆ,
ಅನುಭವಿಸೋ ಮನಸಿಗೂ
ಕಾದು ನೋಡುವ ಆಸೆಯಿರೆ...
ಹರಿಯುವ ನೀರಿನಲೂ
ನೂರಾರು ಕಥೆಗಳಿವೆ,
ಕೇಳುವ ತಾಳ್ಮೆಯಿರೆ
ಬದುಕಿನ ಪಯಣಕೆ...
ಹಕ್ಕಿಗಳ ಇಂಚರದಿ
ಸಪ್ತ ಸ್ವರಗಳ ಆಲಾಪವಿದೆ,
ಬದುಕು ಸಂಗೀತವೇ
ಕಲಿಯೋಕೆ ನಿಂತರೆ...
ಓಡುವ ಮೋಡದೊಳು
ಮಳೆಯಾಗೋ ಕನಸಿದೆ,
ಸಾಗರವಾಗೋ ಆಸೆಯಿರೆ
ಬದುಕಿಲ್ಲಿ ಅವಕಾಶವೇ...
No comments:
Post a Comment