17 March, 2024

ಅಂತರ್ಮುಖಿ...

ಭರವಸೆಯ ನಾಳೆಗಳಿಗೆ
ಮನಸೀಗ ಅಣಿಯಾಗಬೇಕಿಲ್ಲಿ,
ಮರೆತು ಹೋದ ಮನಸುಗಳ
ಮರೆತು ಮುಂದೆ ಸಾಗಬೇಕಿಲ್ಲಿ...

ಯಾರೋ ಬಿಟ್ಟ ನೆನಪುಗಳು
ಬದುಕಲಾರವು ಬಹಳ ದಿನ,
ಮರೆಯೋದು ವರವಿಲ್ಲಿ 
ಮೂರು ದಿನದ ಬದುಕಿನೊಳು...

ನಗುವಿರದ ಮುಖವಿಲ್ಲ
ನೋವಿರದ ಬಾಳಿಲ್ಲಾ,
ಸವೆದು ಹೋದ ದಾರಿಯಲೇ 
ನಡೆಯೋದು ಬದುಕಿಲ್ಲಿ...

ನೆರಳೇ ಇಲ್ಲಿ ಕರಗುವುದು
ಕತ್ತಲೆಯ ಛಾಯೆಯಲಿ,
ಸಂಬಂಧಗಳು ಮರೆಯಾಗುವವು
ಕಾಲಚಕ್ರದ ಸುಳಿಯೊಳಗೆ...

No comments:

Post a Comment