ನಗುವಿಲ್ಲದ ಕನಸಿದೆ ಬದುಕಲಿ
ಅಳುವಿಲ್ಲದ ನೆನಪೂ ಇಲ್ಲಿದೆ,
ನೋವಿರದ ಭಾವ ಇಲ್ಲಿದೆ
ನವಿರಾಗಿ ಮನಸ ತುಂಬಿದೇ...
ಭರವಸೆಯ ಮೋಡ ಇಲ್ಲಿದೆ
ಬದುಕಲಿ ಮಳೆ ಸುರಿಸೇ ಕಾದಿದೆ,
ಮನಸಿನ ಭಾರವಾ ಕಳೆಯಲು
ನೆನಪುಗಳ ಗಾಳಿ ಬೀಸಿದೆ...
ನೂರು ನೋವುಗಳು ಮನಸನು
ಕಾರಣ ಹೇಳದೆ ಕಾಡಿವೆ,
ಖುಷಿಯ ಬೆಳ್ಳಿಯ ರೇಖೆಯೊಂದು
ಕಾರಣ ಕೇಳದೆ ಜೊತೆಯಾಗಿದೆ...
ಚಿಂತೆಯೆಂಬ ಹಕ್ಕಿ ಗೂಡೊಂದನು ಕಟ್ಟಿ
ಹಾಡಿದೆ ಮತ್ತೆ ಕಾಡಿದೆ ಮನಸಿನ ಮೂಲೆಯಲಿ,
ಜೀವ ತಿನ್ನೋ ಭಾವಗಳು ಮೌನವಾಗಿವೆ
ಬದುಕಿನ ಸಂತೆಯ ತುಂಬಾ ಗದ್ದಲವೇ...
No comments:
Post a Comment