23 August, 2024

ಭಾವ ಶರಧಿ...

ಬದಲಾಗಿದೆ ಇಲ್ಲಿ ಬದಲಾಗಿದೆ 
ಕಾಲದ ಹರಿವಿನೊಳು ಬದಲಾಗಿದೆ,
ಮನಸಿಲ್ಲಿ ಪೂರಾ ಬದಲಾಗಿದೆ 
ಭಾವಗಳು ಎಲ್ಲಾ ಬದಲಾಗಿವೆ...

ಮರೆತುಹೋಗಿದೆ ಎಲ್ಲಾ ಮರೆತುಹೋಗಿದೆ 
ಜಗದ ಜಂಜಡದೊಳು ಎಲ್ಲಾ ಮರೆತುಹೋಗಿದೆ,
ಮರೆತುಹೋಗಿದೆ ಮನಸಿಲ್ಲಿ ಮರೆತುಹೋಗಿದೆ 
ತಪ್ಪನ್ನ ಕ್ಷಮಿಸೋದ  ಮರೆತುಹೋಗಿದೆ...

ಕಳೆದುಹೋಗಿದೆ ಇಲ್ಲಿ ಕಳೆದುಹೋಗಿದೆ 
ಲೋಕದಾ ಮಾಯೆಯೊಳು ಕಳೆದುಹೋಗಿದೆ,
ಮೋಹದಾ ಬಲೆಯೊಳಗೆ ಕಳೆದುಹೋಗಿದೆ 
ಎದೆಯೊಳಗೆ ಮನುಜತೆಯು ಕಳೆದುಹೋಗಿದೆ...

ಬದಲಾಗುತಾ ಎಲ್ಲಾ ಮರೆತಾಗಿದೆ 
ಮರೆತುಹೋಗಿ ಇಲ್ಲಿ ಕಳೆದಾಗಿದೆ,
ಬದುಕ ಕಲೆಯನ್ನು ಮರೆತಾಗಿದೆ 
ಮೌಲ್ಯಗಳೆಲ್ಲಾ ಇಲ್ಲಿ ಬರಿದಾಗಿದೆ...

No comments:

Post a Comment