31 August, 2024

ಬೆಳಗು...

ಇರುವ ಜಗದೊಳಗೆ ಹರಿವ ತೊರೆಯಂತೆ 
ಮೂರು ದಿನದ ಬದುಕು,
ಒಂದು ಮುಂಜಾವು ಮತ್ತೆ ಮುಸ್ಸಂಜೆ 
ಬದುಕ ಹಾದಿಯೊಳಗೆ...

ಬಾಲ್ಯದೊಳು ತುಂಟಾಟ 
ಹರೆಯದೊಳು ಕಣ್ಣಮುಚ್ಚಾಲೆಯಾಟ,
ನಡುವೆ ನೋವು ನಲಿವುಗಳ ಕೂಟ 
ಮುಪ್ಪಿನೊಳು ಮತ್ತೆ ವೇದಾಂತ...

ಬಾಲ್ಯದಲಿ ಕನಸಿನೊಳು 
ಭಾವನೆಗಳೊಳಗೆ ಹರೆಯದಲಿ,
ಆಸೆಯೊಳು ಮುಪ್ಪಿನಲಿ 
ಬದುಕು ಸವೆದಿಹಿದು ಇಲ್ಲಿ ಕಾಣ...

ಬದುಕಿನ ಜಂಜಾಟಗಳ ನಡುವೆ 
ಮನಸು ಹುಡುಕಿದೆ ನೆಮ್ಮದಿಯ,
ಆಗೊಮ್ಮೆ ಈಗೊಮ್ಮೆ ಮತ್ತೆ ಹೊರಳಿ 
ಮನಸು ತುಳಿಯುತಿಹುದು ಸನ್ಯಾಸದ ಹಾದಿಯನ್ನೇ...

No comments:

Post a Comment