20 November, 2024

ಜಗದ ಸಂತೆಯಲಿ...

ಮನದ ಮೌನದ ಮಾತಿಗಿಂತ 
ಕನಸಿನೊಳಗಿನ ಹಾಡೇ ಖುಷಿಯೀಗ,
ಜೊತೆಗೆ ಇರುವ ಮೌನಕ್ಕಿಂತ 
ಏಕಾಂಗಿತನದ ಪಾಡು ಖುಷಿಯಾಗಿದೆಯಲ್ಲ ...

ಹುಟ್ಟಿನ ಅಳುವಿನ ಜೊತೆಗೊಂದು ನಗುವು 
ಸಾವಿನ ವಿದಾಯಕ್ಕೊಂದು ಆಳುವು,
ಬದುಕು ಬೆಸೆದ ಭಾವಗಳ ಕೋಟೆ 
ನಗು ಅಳುವಿನ ಜೊತೆಗೆ ನಿರ್ಲಿಪ್ತ ಜೀವ...

ಜೀವ ಅರಳಿಸೋ ಭಾವದೊಳಗೆ 
ಮರುಳು ಮಾಡುವ ಮಾಯಾಲೋಕ,
ಬದುಕು ಅರಳಿಸೋ ಜೀವದೊಳಗೂ
ನಿನ್ನೆ ನಾಳೆಗಳ ಜೊತೆಗೆ ಪೀಕಲಾಟ...
 
ನಡೆಯುತಿಹುದು ಬದುಕಿನ ಜಾತ್ರೆಯಿಲ್ಲಿ
ಜಗದ ಸಂತೆಯೊಳು ತಿರುಗಬೇಕು,
ಆರು ಭಾವಗಳ ನೂರು ಕನಸುಗಳ 
ಮೆರೆಸಿ ಮರೆಯಬೇಕು ಬದುಕಯಾತ್ರೆಯೊಳಗೆ...

No comments:

Post a Comment