23 September, 2025

ಒಡಲ ಕಡಲು...

ನದಿಯೊಂದು ಹರಿಯುತಿದೆ ಇಲ್ಲಿ 
ಆರು ಭಾವಗಳ ನೂರು ನೋವುಗಳ ಹೊತ್ತು, 
ಮನಸೊಳಗಿನ ಹರಿವಿನ ರಭಸಕೆ
ಭೋರ್ಗರೆವ ಕಡಲಿಲ್ಲಿ ಬದುಕು...

ಸುರಿಯುತಿದೆ ಮಳೆಯೊಂದು ಬದುಕಲಿ 
ಕನಸೆಂಬ ಹೆಸರು ಇದಕೆ ಇಲ್ಲಿ,
ತೋಯ್ದ ಮನಸಿಲ್ಲಿ ಹಚ್ಚ ಹಸುರು
ನಾಳೆಗಳ ನೆನಪಿನಲಿ ಹೊಸ ಚಿಗುರು...

ಮೂಡುತಿದೆ ಹೊಸದೊಂದು ಕಾಮನಬಿಲ್ಲು
ಬದುಕ ಆಗಸದ ಅಂಚಿನಲಿ,
ಮಳೆಯೂ ಇರಲಿ ಬಿಸಿಲೂ ಬರಲಿ 
ಮನದ ಮಡಿಲು ತುಂಬಿರಲಿ...

ನೂರು ನೋವಿನ ಕಡೆಗೆ ಒಂದು ನಗೆಯಾ ಬೀರಿ
ಪಯಣ ಸಾಗಲಿ ಮುಂದೆ ಬದುಕ ಕಡಲಲಿ,
ಅಲೆಗಳೆಷ್ಟೇ ದೂರ ತಳ್ಳಿದರೂ ಇಲ್ಲಿ 
ಮನಸೆಂಬ ನದಿಯು ತುಂಬಿ ಹರಿಯುತಿರಲಿ...

No comments:

Post a Comment