ಪ್ರತಿ ಹೂವಿನ ದಳಗಳಲ್ಲಿ ತುಂಬಿರುವಂತೆ ಘಮವು,
ನಿನ್ನಲ್ಲಿ ತುಂಬಿ ತುಳುಕುತ್ತಿದೆ ಅಂತರ್ಯದ ಚೆಲುವು.
ಪ್ರತಿ ಹೂವಿನ ಮಕರಂದಕೆ ಹಾತೊರೆಯುವಂತೆ ದುಂಬಿಯು,
ನಿನ್ನೊಲವು ಆಹ್ವಾನಿಸೆ ಕಾತರಿಸಿದೆ ಮನವೂ.
ಉಕ್ಕಿ ಹರಿವ ತೊರೆಯಂತೆ ಮಿತಿಮೀರಿವೆ ಕನಸು,
ಮನಸ ತೊರೆಯಲ್ಲಿ ಈಜುವ ಮೀನಾಗಿವೆ ನಿನ್ನ ನೆನಪುಗಳು.
ಧುಮ್ಮಿಕ್ಕೋ ಜಲಪಾತವಾಗಿದೆ ನನ್ನೊಳಗಿನ ನಿನ್ನೊಲವು,
ಮೋಹದ ಆವೇಗಕೆ ಮೈಮರೆತಂತಿದೆ ಮನವು.
ನೂರಾರು ಸವಿ ನೆನಪುಗಳ ಗೂಡಾಗಿದೆ ಮನವು,
ಎದೆಯೊಳಗೆ ಬಚ್ಚಿಡುವ ಮನಸಾಗಿದೆ ಈ ಒಲವ...
No comments:
Post a Comment