23 June, 2013

ನಾನು ನನ್ನ ಕನಸು...




ಪ್ರೀತಿಯಲಿ ನೀ ನನಗೆ
ತಾಯಿಯಾಗಬೇಕು ಹುಡುಗಿ,
ನಿನ್ನ ಪ್ರೀತಿಯ ಮಡಿಲಲ್ಲಿ ನಾನು ಪುಟ್ಟ
ಮಗುವಾಗಬೇಕು.

ಹಿತವಾದ ಸಂಜೆಯಲಿ
ನೀನೆನ್ನ ಜೊತೆಯಾಗಬೇಕು,
ನಿನ್ನ ಬಳುಕುವ ನಡುವ ಬಳಸಿ
ನಾ
ನಡೆಯುತಿರಬೇಕು.

ಕಾಶ್ಮೀರದ ಹಿಮದಲ್ಲಿ
ಮನಸಾರೆ ನಲಿಯಬೇಕು,
ನಿನ್ನ ಕಾಡಿಸಿ
ನಗುವ ಹೊಮ್ಮಿಸಿ
ಸಿಹಿ ಮುತ್ತೊಂದ
ಪಡೆಯಬೇಕು.

ಮಡಿಕೇರಿ ಮಂಜಿನ
ಹಿತವಾದ ಚಳಿಯಲಿ
ಮನಸ ತಣಿಸಬೇಕು
ನಿನ್ನ ನಗುವಿನ
ಮಧುರ ರೀತಿಯ
ಕಣ್ಣಲ್ಲೇ ಸವಿಯಬೇಕು.

3 comments:

  1. ಪ್ರೀತಿಯಲಿ ನೀ ನನಗೆ
    ತಾಯಿಯಾಗಬೇಕು ಹುಡುಗಿ
    ಬಹುಶಃ ಓಪನಿಂಗಿನಲ್ಲೇ ಸಿಕ್ಸರ್ ಎತ್ತುವ ಕಲೆ ನಿಮಗೆ ಪಳಗಿದೆ.
    http://badari-poems.blogspot.in

    ReplyDelete
  2. ಚೆನ್ನಾಗಿದೆ ಜಯಪ್ರಕಾಶ್ ಸಾರ್

    ReplyDelete