**ಒಲವ ಸಿಂಚನ**
ಮನಸ ಆಗಸದಲ್ಲಿ
ನಿನ್ನ ನೆನಪುಗಳ
ಕಾರ್ಮೋಡ ಕವಿದಿದೆ
ಗೆಳತಿ,
ಪ್ರೀತಿ ಮಳೆಯ
ನಿರೀಕ್ಷೆ ಸುಳ್ಳಾದರೂ
ಕಾವ್ಯ ಸಿಂಚನವಾಗುವುದೆಂಬ
ತೃಪ್ತಿ ಮಾತ್ರ
ನನ್ನದು.
*********
ವರುಣನಾಗಮನಕೆ
ಭುವಿಯು ಕಾತರಿಸಿದಂತೆ
ಮನಸ ತೆರೆದು
ಕಾದಿಹೆನು
ನಿನ್ನೊಲವಿನ
ಆಗಮನಕೆ
ಹುಡುಗಿ,
ಮನಸು ಬರಡಾಗುವ
ಮುನ್ನ ಸುರಿಸು
ನೀ
ಒಲವ ಸಿಂಚನ.
"ಮನಸು ಬರಡಾಗುವ
ReplyDeleteಮುನ್ನ ಸುರಿಸು "
ಎನ್ನುವ ಕವಿ ಆಶಯ ನ್ಯಾಯಯುತವಾಗಿದೆ.
Thank u sir
Delete