*ನನ್ನೆದೆಯಾ ಹಾಡು*
ಪ್ರೀತಿಯ ಪ್ರಣತಿ
ನೀನಾಗುವುದಾದರೆ,
ಬೆಳಗುವ ಜ್ಯೋತಿ
ನಾನಾಗುವೆ...
ಭಾವಕೆ ಭಾವವ
ನೀ
ಬೆಸೆಯುವುದಾದರೆ
ನಿನ್ನ ಹೆಸರಿಗೆ
ಉಸಿರ ಜೊತೆಯಿಡುವೆ.
*********
ಮರಳ ಮೇಲೆ
ಬರೆದೆ ಗೆಳೆಯಾ
ನನ್ನ ಒಲವಿನೋಲೆಯ
ಅಲೆಗಳವು ಬಂದು
ಕದ್ದೊಯ್ದರೂ...
ನನ್ನೊಲವು ಮಾತ್ರ
ನಿನ್ನದೇ.
*********
ಮನಸಿನಾಳದಿ
ನಿನ್ನ
ನೆನಪಿನಲೆಗಳ
ಕಲರವ,
ಇಡುತ್ತಾವೆ
ಎನ್ನೆದೆಗೆ
ಪ್ರೀತಿ
ಕಚಗುಳ
ಮೂರು ಭಾವಗಳ ಸಮ್ಮಿಲನವೇ ಬದುಕು.
ReplyDeleteThis comment has been removed by the author.
ReplyDeletePreethi jeevana aagalaradu adre jeevana preethi mele avalambitha annodu jeevana sathya.
ReplyDeleteಚೆನ್ನಾಗಿವೆ ಜಯಪ್ರಕಾಶರೆ.. ಫಾಂಟುಗಳು ಸ್ವಲ್ಪ ದೊಡ್ಡದಾಗಿದ್ದರೆ ಓದಲು ಇನ್ನೂ ಖುಷಿಯಾಗುತ್ತಿತ್ತು ಅನಿಸಿತು..
ReplyDeleteಬ್ಲಾಗಿಗೆ ಮೊದಲ ದಿನ ಬಂದವ ಏನು ಹೀಗೆ ಹೇಳುತ್ತಿದ್ದಾನೆ ಅಂತ ಅನ್ಯಥಾ ಭಾವಿಸಬೇಡಿ.. ಬ್ಲಾಗ್ಲೋಕದ ಒಬ್ಬ ಎಳೆಯ ನಾನು.. ಆದರೂ ಅನಿಸಿದ್ದು ಹಾಗೇ ಹೇಳಿದ್ದೇನೆ. ವಂದನೆಗಳು..
Thank u sir.nimma anisike,abhiprayakke,salahegalige sadaa swagatha.
ReplyDelete