ಅರಳುವ ಹೂವುಗಳು
ನಾವು,
ಕೀಳದಿರಿ ನೀವು
ಈ ಮೊಗ್ಗುಗಳ.
ಜಾತಿಯ ಬೇಲಿಯ
ಹಾಕದಿರಿ ನಮಗೆ,
ಕಲಿಯಬೇಕಿದೆ ನಾವು ಈ
ಮಹೋನ್ನತ ಸಂಸ್ಕೃತಿಯ.
ನಾಳೆಯ ಕಾಯುವ
ಯೋಧರು ನಾವು,
ಕಸಿಯದಿರಿ ನೀವೆಮ್ಮಯ
ಕನಸುಗಳ.
ಕತ್ತಲೆ ಕಳೆಯುವ
ಸೂರ್ಯರು ನಾವು,
ಕರಗಿಸಬೇಡಿ ಈ
ನಗುವನ್ನು.
ಚಿಂತೆಯೆ ಇಲ್ಲದ
ಭಾವವು ನಮ್ಮದು,
ತುಂಬದಿರಿ ಭಯದ
ನೆರಳನ್ನು.
ನಾಳೆಯೆಂಬುದು
ನಮ್ಮದೇ ಎಂದೂ,
ಓ ಹಿರಿಯರೇ ಹರಸಿ
ನೀವೆಮ್ಮನ್ನ
ಮಕ್ಕಳ ಬದುಕನ್ನು ರೂಪಿಸುವ ಜವಾಬ್ದಾರಿ ಹೊತ್ತ ಹೆತ್ತವರು ತುಂಬಾ ಬುದ್ದುವಂತಿಕೆಯಿಂದ ನಡೆಯಬೇಕಾಗುತ್ತದೆ.
ReplyDeletehaudu sir.
ReplyDelete