15 December, 2013

ಮನಸೇ ನೀ ಹೀಗೇಕೆ...



ಬಣ್ಣವಿಲ್ಲದ ಆಕಾರವಿಲ್ಲದ
ಓ ಮನಸೇ,
ನಿನ್ನ ಭಾವನೆಗಳಿಗೆ
ಬಣ್ಣ ಹಚ್ಚುವೆಯೇಕೆ.

ತೂಕವಿಲ್ಲದ ಬಿಂಬ
ನೀನಾಗಿರಲು
ಮೇಲು - ಕೀಳಿನ
ತಕ್ಕಡಿ ಇಡುವುದು ಸರಿಯೇ.

ಎಲ್ಲರಲೂ ಪ್ರೀತಿಯ
ಹುಡುಕುವ ನಿನಗೆ
ಜಾತಿ ಧರ್ಮದ
ಕೋಟೆಯ ಹಂಬಲವೇಕೆ.

ವಿಶ್ವಾಸವೇ ಬದುಕ
ತಳಹದಿಯಾಗಿರಲು
ರಾಗ ದ್ವೇಷಗಳ
ಈ ಸರಪಳಿಯೇಕೆ.

2 comments:

  1. ಸರ್ವ ಭಾವಗಳ ಮೂಲ ಬಾವಿಯೇ ಮನಸು. ಅಲ್ಲಿ ಜಿನುಗುವ ನೀರು ಅದರ ಕಲ್ಪಿತ ರುಚಿ ಮಿಳಿತ.
    ನಿಜವಾಗಲೂ ಮನಮುಟ್ಟಿದ ಕವನ.

    ReplyDelete