ದೇಹವೆಂಬ ಗರ್ಭಗುಡಿಯೊಳು
ಆತ್ಮವೆಂಬ ದೇವನಿರುವನು,
ಆತ್ಮಸಾಕ್ಷಿಯೆಂಬುದೇ ನಿತ್ಯ ಪೂಜೆಯವಗೆ
ತಿಳಿಯೋ ಮೂಢ ಮನವೇ.
**********
ಸಂತನೆದೆಯೊಳಗೂ
ಒಲವು ತುಂಬಿದೆ ನೋಡ
ಅಂತಿಂಥ ಪ್ರೀತಿಯಲ್ಲವದು,
ನಾಳೆಯ ಭರವಸೆಯ ಜೀವನ ಪ್ರೀತಿ
ಜಗದ ಕತ್ತಲ ಕಳೆಯೋ ಜ್ಯೋತಿಯದು.
**********
ಕತ್ತಲ ಕೊಂದ ಸೂರ್ಯನಿಗೆ
ಪ್ರತಿದಿನ ಲೋಕ ಬೆಳಗುವ ಸಜೆ
ಇರುಳನು ತಂಪಾಗಿಸಿದ ಚಂದ್ರನಿಗೆ
ಅಮಾವಾಸ್ಯೆಯೆಂಬ ರಜೆ,
ನನ್ನೊಳಗೆ ಅನುಮಾನ
ಇರಬಹುದೇ ಕಾರಣ
ಸೂರ್ಯ ಕ್ರಾಂತಿಕಾರಿ
ಚಂದ್ರ ಮಂದಗಾಮಿ.
No comments:
Post a Comment