20 February, 2014

** ಚಂದ್ರಿಕೆ **



ಚಂದ್ರನು ಚೆಲ್ಲಿದ ಬೆಳದಿಂಗಳ
ಒನಪು ನನ್ನವಳು,
ಹನಿ ಹನಿ ಪ್ರೀತಿಯ ಸೇರಿಸುತಾ
ಸಾಗರವಾದವಳು.

ಬದುಕಲಿ ಸುಂದರ ಕನಸುಗಳ
ಪೋಣಿಸಿ ನಿಂದವಳು,
ಪ್ರೀತಿಯ ಭಾವವ ಚಿಮ್ಮಿಸುತಾ
ಅವ್ಯಕ್ತ ಭಾವನೆ ತಾನಾದವಳು.

ಉಸಿರಿಗೆ ಮಿಡಿಯುವ ಮನಸಾಗಿ
ಜೊತೆಯಲಿ ಬಂದವಳು,
ಉಲಿಯುವ ಪ್ರತಿ ನುಡಿಗಳಲೂ
ಪ್ರೀತಿಯಾಗಿ ಬೆರೆತವಳು.

ಕಾಮನಬಿಲ್ಲಿನ ಬಣ್ಣಗಳಿಗೂ
ಅರ್ಥವ ನುಡಿದವಳು,
ಮನಸಿನ ಭಾವವ ಬೆಳಗಿಸಿದ
ಕೋಲ್ಮಿಂಚು ನನ್ನವಳು.

ಯೋಗಿಗೆ ಪ್ರೀತಿಯ ಬೋಧಿಸಿದ
ಜೋಗತಿ ನನ್ನವಳು,
ಹೆಸರನು ಉಸುರದೆ ಜೊತೆಯಾದ
ಜೀವವು ನನ್ನವಳು.

ನೂರು ನೋವಲೂ ಸುಮ್ಮನೆ ನಗುವ
ಚಂದ್ರಿಕೆ ನನ್ನವಳು,
ನಾ ನಕ್ಕರೆ ಜೊತೆಯಾಗಿ
ಅರಳೋ ಸುಮ ಇವಳು.

No comments:

Post a Comment