ನೀನೊಂದು ಸುಂದರ ಕಾವ್ಯ ಗೆಳೆಯಾ
ನಿನ್ನೊಳಗಿನ ಭಾವವಷ್ಟೇ ನಾನು,
ನೂರು ಪದಗಳ ಹಂದರ ನೀನು
ಪ್ರೀತಿಯ ಒಂದು ಪದವಷ್ಟೇ ನಾನು.
ಕವಿತೆಯಾಗಲಾರೆ ನಾನೆಂದೂ
ನಿನ್ನ ಒಲವ ಹೊರತಾಗಿ,
ನೀನೊಂದು ಕಥೆಯಾದರೂ ಸರಿಯೇ
ಜೊತೆಗಿರುವೆ ನಾ ನಿನ್ನೊಳಗೆ.
ಕವಿತೆಯಾಗಿದ್ದು ನಾನಲ್ಲ
ನಿನ್ನೊಳಗಿನ ಆ ಸುಂದರ ಭಾವ,
ನಿನ್ನೊಲವು ಜೊತೆಗಿರಲು
ಇನಿತು ನಾನೇ ಧನ್ಯ.
ನೀ ಎನ್ನ ಅಭಿಮಾನಿ
ನಾ ನಿನ್ನಯ ಪ್ರೇಮಿ
ಈ ಸ್ನೇಹದ ಬೆಸುಗೆಯಲಿ,
ಪ್ರೀತಿಯ ಹೆಸರಿಡಲೇ ಈ ಅನುಬಂಧಕೆ.
ಬಂಧನವಾಗದಿರಲಿ ಈ ಭಾವ
ಕವಿತೆಯಾದರೂ ಸರಿಯೇ,
ಕಾದಂಬರಿಯಾಗಿಸದಿರುನನ್ನ
ನಿನ್ನ ಪ್ರೀತಿ ಜೋಳಿಗೆಯಲಿ.
No comments:
Post a Comment