12 March, 2014

ಅವಳ ಒಲವಿಗೆ...



ಬರೆಯುವೆ ನಾ
ಕವಿತೆಗಳ
ನಿನ್ನ ಹೆಸರಿಗೆ
ಕಾರಣವಿಷ್ಟೆ
ಅವಕ್ಕೂ ಬೇಕಿದೆ
ನಿನ್ನೊಲವು ಅಷ್ಟೆ.

**********

ಚಂದ್ರ ತಾನು
ಕರಗುತಿರುವ
ನಿನ್ನ ನೋವಿಗೆ
ಗೆಳತಿ,
ನೀನು ನಕ್ಕರೆ
ತಾನು ನಲಿವ
ಪೂರ್ಣ ಹೊಳಪಲಿ.

**********

ಕನಸುಗಳಿಗೆ
ನಾನು
ಕಾವಲಾಗುವೆ
ಹುಡುಗಿ,
ನೆನಪುಗಳಿಗೆ
ನೀನು
ಬೇಲಿಯಾಗುವೆಯಾದರೆ.

No comments:

Post a Comment