12 March, 2014

** ದ್ವಂದ್ವ **



ಮನಸ ಆವರಿಸಿದೆ ಯಾಕೋ
ಬುದ್ಧನ ಶಾಂತಿಯ ಮಂತ್ರ,
ನೆಲದ ಮಹಿಮೆಯೋ ಅರಿಯಲಾರೆ
ಆಗುತ್ತಿರುವೆ ನಾನೇತಕೋ ಅದಕೇ ಬದ್ಧ.

ಬುದ್ಧನಿದ್ದ ನಾಡಿನಲ್ಲಿ
ಜನಿಸಿದ ವಿವೇಕನು,
ಸ್ವಾಭಿಮಾನಿಯಾದ ಕಿಚ್ಚಿನ ಕಿಡಿಯಾದ
ಪುರುಷ ಸಿಂಹನವನು.

ಮೈಗೂಡಲಿಲ್ಲ ಏಕೋ ಕಾಣೆ
ಕಿಚ್ಚಿನ ಸ್ವಭಾವವದು ಜೊತೆಯಲ್ಲಿ,
ಕಿವಿಗಳವು ಕೇಳಿದರೂ
ಬಗ್ಗಲಿಲ್ಲ ಮನಸೇಕೋ ಸ್ವಾಭಿಮಾನದ ನುಡಿಗೆ.

ಬುದ್ಧನಾದರೂ ಸಿದ್ಧನಾಗಬೇಕಿದೆ
ನಾಳೆಯ ಬದುಕಿನ ಕಡೆಗೆ,
ಕಿಡಿಯೊಂದ ಹೊತ್ತಿಸಬೇಕಿದೆ
ಸ್ವಾಭಿಮಾನದ ನಡಿಗೆಗೆ.

ಬೇಕಿದೆ ಮನಸಿಗೀಗ
ಎಂದೂ ಆರದ ಗಾಯ,
ಸ್ವಾಭಿಮಾನದ ಕಿಚ್ಚು ಹಚ್ಚುವ
ನಿತ್ಯ ನಿರಂತರ ಭಾವ.

2 comments: