12 March, 2014

ಇದು ಹೃದಯದ ಮಾತು...



ಹೃದಯದ ಗೋಡೆಯ ತುಂಬಾ
ಪ್ರೀತಿಯ ಚಿತ್ರಗಳೇ,
ಮೂಡಿಸಿದೆ ಈಗ
ಮನಸ ಹಾಳೆಯ ತುಂಬಾ
ನೆನಪುಗಳ ಚಿತ್ತಾರ.

**********

ಹೃದಯದ ಗೂಡಿನ ಒಳಗೆ
ನೂರೆಂಟು ಭಾವನೆಗಳ ಕಲರವ
ಕನಸನು ಹೊಸೆದು ಪ್ರೀತಿಯ ಹಕ್ಕಿ
ಉಲಿಯಬಹುದೇ
ಒಲವಿನ ಕುಹೂ ಕುಹೂ.

**********

ಹೃದಯ ಮಂದಿರದಿ
ಢವ ಢವ ಘಂಟಾನಾದ
ಎದೆಗೆ ಕಿವಿಯಾನಿಸಿ ನೋಡು
ಕೇಳುತಿಹುದಲ್ಲಿ
ಪ್ರೀತಿಯ ಸುಮಧುರ ನಾದ.

2 comments: