29 May, 2014

ಯಾರವಳು...



ಮನಸಿನೊಳಗಿನ ಭಾವವದು
ಹೇಳಿ ಹುಟ್ಟಲೇ ಇಲ್ಲ,
ಪ್ರೀತಿಯ ಅರ್ಥವದ
ತಾನು ಹುಡುಕುತಿತ್ತು.

ಭುವಿಗೆ ತಾಯಿಯ ಹೆಸರ
ಕೊಟ್ಟಿಹ ಮನಸದು,
ಮನಸ ಕೂಸಿಗೆ ಒಂದು
ಹೆಸರ ಹುಡುಕುತಿತ್ತು.

ಹೆಣ್ತನವ ತುಂಬಿದ ಭಾವವದು
ತನಗೊಂದು ಹೊಸ ಹೆಸರ ಹಂಬಲಿಸುತಿತ್ತು,
ಮನಸ ಆ ಪ್ರೀತಿಗೆ ನಾನು
ಅವಳ ಹೆಸರನ್ನೇ ಇಟ್ಟುಬಿಟ್ಟೆ.

ರೆಕ್ಕೆಬಿಚ್ಚಿ ಹಾರುವ
ಕನಸುಗಳವು ಹರಡಿದವು,
ಮನದಗಲ ಅವಳದೇ ಹೆಸರ
ಜೊತೆಯಲ್ಲಿ ಹೊತ್ತು.

ನಾನೆಂದೂ ಹುಡುಕಲಿಲ್ಲ
ಮನಸ ತುಂಬಿದ ಆ ಭಾವವ,
ಒಲುಮೆಯಾ ಹೆಸರೊಂದ ಬಿಟ್ಟು
ಜೊತೆಯಾಗ ಬಯಸುವ ಜೀವವೊಂದ.

ನನ್ನೊಳಗಿನ ಅವಳು ಅದು
ಬರೀಯ ಸ್ನೇಹವಷ್ಟೇ,
ಸಲುಗೆ ಮೀರದ ಅವಳು
ನನ್ನ ಮನಸ ಪ್ರೀತಿಯಷ್ಟೇ.

2 comments:

  1. ಮನವು ನಿರ್ಮಲವಿದ್ದರೆ ಜಗವೆಲ್ಲ ಪ್ರೇಮಮಯವಂತೆ.
    ಪರಿಪೂರ್ಣ ಒಲವೇ ಸಾಕ್ಷಾತ್ಕಾರದ ಕವನ.

    ReplyDelete