ಬೆಳಗೆದ್ದು ಮೊದಲ ನಮನ
ಈ ಪುಣ್ಯಭೂಮಿಗೆ,
ಮನುಜ ಜನ್ಮವನಿತ್ತ
ಈ ಕರ್ಮಭೂಮಿಗೆ.
ಪ್ರಕೃತಿಯಲಿ ದೇವರ ತೋರಿದ
ಪವಿತ್ರ ಭೂಮಿಗೆ,
ಕರವ ಜೋಡಿಸುವೆ ನಾನು
ಈ ದೇವ ಭೂಮಿಗೆ.
ಸಂಸ್ಕೃತಿಯ ತೊಟ್ಟಿಲು
ನನ್ನ ಮಣ್ಣಿದು,
ಜಗಕೆ ಬೆಳಕ ತೋರಿದ
ಪುಣ್ಯ ಭೂಮಿಯೂ.
ಋಷಿ ಪುಂಗವರ ತಪೋಭೂಮಿ
ನನ್ನ ನಾಡಿದು,
ಶಿರವ ಭಾಗಿ ನಮಿಸುವೆನು
ಈ ಭುವಿಯ ಸ್ವರ್ಗಕೆ.
ವೇದಗಳ ತವರು ಇದು
ಜ್ಞಾನ ಭೂಮಿಯೂ,
ಯೋಗ,ಆಯುರ್ವೇದಕೆ
ತವರು ನಾಡಿದು.
ಕೋಟಿ ದೇವರುಗಳ ಪೂಜಿಪ
ದೇವಮಂದಿರವೂ,
ಹೆಜ್ಜೆ ಹೆಜ್ಜೆಗೂ ನಮಿಪೆ
ಈ ಪುಣ್ಯಭೂಮಿಗೆ.
ವೀರ ಧೀರರಾಳಿದ
ಭರತ ಭೂಮಿಗೆ,
ಹೆಮ್ಮೆಯಿಂದ ನಮಿಸುವೆ
ಶೌರ್ಯ ಮೆರೆದ ಮಣ್ಣಿಗೆ.
ಯಾರು,
ReplyDeleteಜನನಿ ಜನ್ಮ ಭೂಮಿಷ್ಚ...
ಮಂತ್ರವನ್ನು ನಂಬುವರೋ ಅವರೇ ಶ್ರೇಷ್ಟರು
haudu badari gurugale.sadaa bennu thattutthiruva nimma preethigido namana.
Delete