ನೀನೊಂದು ಯುಗಳದ ಗೀತೆ
ಪದವಾಗಬಹುದೇ ನಾ ನಿನ್ನೊಳು.
ಅರಿಯಲಾರೆ ನಾ ನಿನ್ನಂತರಂಗವ
ತುಂಬಬಹುದೇ ನಾನದನು ಭಾವದಿಂದಲಿ.
ಪ್ರೇಮಿಯಾಗಬಲ್ಲೆನು ನಾ ನಿನ್ನೊಲವಿಗೆ
ಜೀವ ತುಂಬಬೇಕಿದೆ ಪ್ರೀತಿಯೆದೆಯೊಳಗೆ.
ನೀನೊಂದು ಕಾವ್ಯಕನ್ನಿಕೆ
ಇಂದ್ರ ಚಂದ್ರನಾಗಬಲ್ಲೆನೇ ನಾ ನಿನ್ನೊಳಗೆ.
ಹೊತ್ತು ತರಬಲ್ಲೆ ನಾ ಮೇಘ ಸಂದೇಶ
ಬರಬಹುದೇ ಬಾಳಿನೊಳು ಪ್ರೀತಿ ಮುಂಗಾರು.
ಮೌನ ಮೆರೆದ ಗೆಳತಿಯೇ
ಕಲಿಸಬಹುದೇ ನಾನೀಗ ಪ್ರೀತಿಯ ಭಾಷೆಯ.
ನನ್ನೊಳು ಉಸಿರಾಗಿ ಬೆರೆತ ಮನಸೇ
ಬಂದು ಸೇರಬಹುದೇ ನಿನ್ನೊಲವಪ್ಪುಗೆಯಲಿ.
ಹೃದಯ ಮಂದಿರದಿ ವಿರಾಜಿಪ ಪ್ರೇಮ ದೇವತೆಯೇ
ಸಿಗಬಹುದೇ ನನಗಪ್ಪಣೆ ನಿನ್ನೊಲವ ಪೂಜೆಗೆ.
:) :)ಚೆನಾಗಿದೆ :)
ReplyDeleteಈ ನಿವೇದನೆಯನೋಮ್ಮೆ ನಾನು ಪ್ರಯೋಗಿಸಿ ನೋಡುತ್ತೇನೆ! ;-)
ReplyDeletehahaha thankn u sir
Delete