17 July, 2014

ನಾನೂ... ನನ್ನ ಕನಸು...



ಖುಷಿಯ ಹುಡುಕಿದೆ ನಾ ನನ್ನ ಕನಸುಗಳಲ್ಲಿ
ಸುಖದ ತೃಪ್ತಿಯು ಇತ್ತು ಕನಸಿನಾ ನೆರಳೊಳಗೆ,
ಕನಸುಗಳ ನಾ ಕಂಡೆ ನನಸಾಗಿಸಲೆಂದಲ್ಲಾ
ಮೂರು ದಿನದ ಪಯಣಕೆ ಜೊತೆಯಾಗಿರಬೇಕೆಂದು.

ಕಂಡ ಕನಸುಗಳೆಲ್ಲ ನನಸಾಗುವುದು ಇಲ್ಲ
ಹಠವಂತೂ ಇಲ್ಲವೇ ಇಲ್ಲ ಕನಸ ನಿಜವಾಗಿಸಲು,
ಆಸೆಯೊಂದಿತ್ತು ಏಕಾಂಗಿಯಾಗಿ ಬದುಕ ನೋಡಲು
ಕನಸುಗಳವು ಕಟ್ಟಿಕೊಟ್ಟವು ನಾ ನಡೆಯೋ ದಾರಿಯ.

ನಾಳೆಗಳ ಮರೆತು ಕನಸ ಬೆಳೆಸಿದೆ
ಕೈಹಿಡಿಯಿತು ಮನಸದುವೇ ಸ್ಪೂರ್ತಿಯಾಗಿ,
ನಗುವುದ ಕಲಿತೆ ನಾ ನನ್ನ ಕನಸಿನೊಳಗೆ
ನೂರು ಜಂಜಡಗಳ ನೋವ ಮರೆತು.

ಬೆಳೆದು ನಿಂತೆ ನಾ ಕಲ್ಪನೆಗಳ ಮೀರಿ
ತಟ್ಟಲೇ ಇಲ್ಲ ಯಾವ ಭಾವದ ಹಂಗು,
ಸ್ನೇಹವಾಯಿತು,ಪ್ರೀತಿಯಾಯಿತು ನನ್ನ ಕನಸು
ಮನಸು ತಾನು ನಲಿಯಿತು ಹರುಷ ಉಕ್ಕಿ.

ಕನಸುಗಳದುವೇ ನನ್ನ ಜೀವನಾಡಿ
ಕೆಡವಲಾರೆ ಅದ ನಾನು ಕಲ್ಪನೆಗಳ ರಾಶಿಯೊಳಗೆ,
ಜೀವನ ಪ್ರೀತಿಯಿತ್ತ ಕನಸು ನನ್ನದು
ಜೀವನವಿರುವರೆಗೆ ಉಳಿಯುವೆ ನಾ ಕನಸುಗಾರನಾಗಿ.

2 comments:

  1. ಕನಸು ಇರದೆ ನನಸಾಗದು.
    ಪ್ರೇರಕ ಕವನವಿದು.
    ಲಾಲಿತ್ಯಕ್ಕೆ ಬೆರಗಾದೆವು.

    ReplyDelete