ಅಂಬರದ ಮನೆಗೆ
ಚಂದಿರನು ಕರೆದಿಹನು
ಬೆಳದಿಂಗಳೂಟಕೆ
ಹೋಗೋಣ ಬಾ ಗೆಳತಿ.
ಚಂದಿರನ ಅಂಗಳದಿ
ಚುಕ್ಕಿ ತಾರೆಗಳ ಹೊಳಪಿನಲಿ
ಕೂಡಿ ನಲಿಯೋಣ
ಬಾರೆ ಬಾ ಗೆಳತಿ.
ಜೊತೆಯಾಗಿ ಸೇರಿ
ಕುಣಿಯುತ್ತಾ ನಲಿಯುತ್ತಾ
ಚಂದಮಾಮನ ಜೊತೆಯಾಗಿ
ಬೆಳದಿಂಗಳೂಟವ ಸವಿಯೋಣ.
ಮೋಡಗಳ ಮರೆಯಲ್ಲಿ
ಕಣ್ಣಮುಚ್ಚಾಲೆ ಆಡುತ್ತಾ
ನಕ್ಕು ನಲಿಯುತ್ತಾ
ಬೆಳದಿಂಗಳಿಗೆ ಬಣ್ಣವ ಹಚ್ಚೋಣ.
ಚಂದಮಾಮನ ಕಥೆಗಳಿಗೆ
ಪಾತ್ರಗಳು ನಾವಾಗುತ್ತಾ
ಮುಗಿಲ ಊರಿಗೆ
ಪ್ರೀತಿಯ ಹಂಚೋಣ.
ತಾರೆಗಳ ತೊಟ್ಟಿಲಲಿ
ಅಂಬರದ ಕತ್ತಲಲಿ
ಪ್ರೀತಿ ಗೀತೆಯೊಂದ
ಹಾಡೋಣ ಬಾ ಗೆಳತಿ.
ಚಂದಮಾಮನ ಕೇಳಿ
ಮೇಘಗಳ ನಾಡಿಂದ
ಬೆಳದಿಂಗಳ ತಂದು
ಭುವಿಯೊಳಗೆ ನಾವು ಹಂಚೋಣ.
ಕವನ ತನ್ನ ಲಾಲಿತ್ಯತೆಯಿಂದ ಗಮನ ಸೆಳೆಯುತ್ತದೆ.
ReplyDelete