16 August, 2014

ಹಬ್ಬ

ರಾಷ್ಟ್ರ ಹಬ್ಬದ ಶುಭಾಶಯಗಳು....

***************


ಬಾರೊ ಅಣ್ಣ ಬಾರೊ ತಮ್ಮ
ತಾಯಿ ಪೂಜೆಗೆ,
ಚೆಲುವೆ ಭಾರತಾಂಬೆಯ
ಪಾದ ಪೂಜೆಗೆ.

ಬಾರೆ ಅಕ್ಕ ಬಾರೆ ತಂಗಿ
ಹುಟ್ಟು ಹಬ್ಬಕೆ,
ಒಲವ ಭರತ ಮಾತೆಯ
ಸಿಂಧೂರ ಹಬ್ಬಕೆ.

ಮಕ್ಕಳೆಲ್ಲ ಹರುಷದಿ
ಕೂಡಿ ನಲಿವ ಹಬ್ಬಕೆ,
ಹಿರಿಯರೆಲ್ಲ ಹೆಮ್ಮೆಯಿಂದ
ಎದೆಯುಬ್ಬಿಸಿ ನಡೆವ ಜಾತ್ರೆಗೆ.

ಜಾತಿ ಧರ್ಮವಿಲ್ಲದ
ಏಕತೆಯ ಹಬ್ಬಕೆ,
ಬಡವ ಶ್ರೀಮಂತರೆಂಬ
ಭೇದವಿಲ್ಲದ ರಾಷ್ಟ್ರಹಬ್ಬಕೆ.

ವೀರ ಧೀರರನ್ನೇ ಹಡೆದಿಹ
ಮಾತೆಯ ಹುಟ್ಟುಹಬ್ಬಕೆ,
ವೀರತನದಿ ದಾಸ್ಯ ಕಳಚಿದ
ಸ್ವಾತಂತ್ರ್ಯದ ಹಬ್ಬಕೆ.

ವೀರರೆಲ್ಲ ಅಮರರಾದ
ಪುಣ್ಯದಿನಕೆ,
ಜೊತೆಯಾಗಿ ನಮಿಸುವ
ಬನ್ನಿ ತಾಯಿ ಪಾದಕೆ.

ಜೊತೆಗೆ ಇಹುದು ತ್ರಿವರ್ಣಧ್ವಜದಿ
ತಾಯ ರೂಪವೂ,
ಏರಿಸೋಣ ನಭದ ಎತ್ತರಕೆ
ಅವಳ ಕೀರ್ತಿಯಾ.

ಏನೇ ಬರಲಿ ಯಾರೇ ಬರಲಿ
ಜೊತೆಯಾಗಿ ನಿಲ್ಲುವಾ,
ತಾಯಿ ಭರತ ಮಾತೆಯಾ
ಸೇವೆಗೈಯ್ಯುತಾ.

2 comments:

  1. ದೇಶ ಪ್ರೇಮ ಪ್ರತಿ ಅಕ್ಷರದಲ್ಲೂ ಮಿಳಿತವಾಗಿದೆ.
    ಸರಿಯಾದ ರಾಗ ಸಂಯೋಜನೆಯಾದರೆ, ವೃಂದ ಗಾನಕೆ ಹೇಳಿ ಮಾಡಿಸಿದಂತಿದೆ.
    ಜೈ ಬಾರತೀ...

    ReplyDelete