ಮೌಢ್ಯವೆಂಬುದು ನನಗೆ
ಜನ್ಮದ ಜೊತೆ ದೊರೆತ ಶಾಪ
ಮೀರಬಲ್ಲೆನೇ ನಾನು ಅದರ ಪಾಶವ.
ಜ್ಞಾನವೆಂಬ ಅಮೃತವು
ಜೀವನದ ಜೊತೆ ದೊರೆತ ವರ
ಹಂಚಬಲ್ಲೆನೇ ನಾ ಅದರ ಸವಿಯಾ.
ನನ್ನೊಳಗೇ ಇಹುದು
ಆರು ಘಟಸರ್ಪಗಳು
ಕಕ್ಕದಿರಬಲ್ಲೆನೇ ನಾನು ಆ ವಿಷವ.
ಸೃಷ್ಠಿಯ ಸೊಬಗದು ರಮಣೀಯ
ಕಣ್ತುಂಬಿಕೊಂಡೆನು ವೈಚಿತ್ರ್ಯಗಳ
ಅರಿಯಬಲ್ಲೆನೇ ಅದರ ಮೂಲವಾ.
ಬುದ್ಧಿಜೀವಿಯ ಪಟ್ಟ ನನಗೆ
ನನ್ನದೇ ಪ್ರಶಂಸಾಪತ್ರ
ಒಳಗಿಹ ಲದ್ದಿ ಕಂಡರೂ ಕಾಣದಂತೆ.
ಧರ್ಮವೆನಗೆ ಆಡಿಕೊಳ್ಳುವ ವಿಷಯ
ಅರ್ಥವೇ ತಿಳಿಯದೆ ಭಾಷ್ಯ ಬರೆದ ಮೂಢ
ಧರ್ಮವಾವುದೆಂದು ಹುಡುಕುತಿಹೆನು.
ದೇವರೆನಗೆ ನಿತ್ಯದ ಭೋಜನವಲ್ಲ
ಉಸಿರಿನ ಜೊತೆ ಬೆರೆತ ಗಾಳಿ
ಕಣ್ತುಂಬಿಕೊಳ್ಳಬಲ್ಲೆನೇ ನಾ ಅವನಿರುವಿಕೆಯಾ.
ಎರಡು ಕಾರಣಗಳಿಂದ ಈ ಕವನ ಮೈಲುಗಲ್ಲಾಗುತ್ತದೆ.
ReplyDeleteಮೊದಲು ಅರಿಷಡ್ವರ್ಗಗಳನ್ನು ಘಟ ಸರ್ಪಗಳಿಗೆ ಹೋಲಿಸಿದ್ದು ಮತ್ತು ಎರಡನೆಯದಾಗಿ ಬುದ್ಧಿಜೀವಿಯ ಅಸಲೀಯತ್ತು. ಹೊರ ಜಗಕೆ ತಾನು ಜಗದೋದ್ಧಾರಕನಂತೆಯೂ ಒಳ ಸುಳಿಯಲ್ಲಿ ಸ್ವಜನ ಪೀಡಕನಂತೆಯೂ ಇರುವವರಿಗೆ ಇದು ಬಟಾ ಬಯಲು ಮಾಡುವ ಕವನ.
manasina mathannu spastavagi grahisida nimma janmegido sharanu...
Delete