12 September, 2014

ಬಾರೇ ಸಖೀ...



ಆಷಾಢ ಮುಗಿದೋಯ್ತು
ಶ್ರಾವಣವು ಕಳೆದೋಯ್ತು
ಬರಲಿಲ್ಲಾ ಯಾಕೆ ನನ್ನ ಗೆಳತಿ.

ಊರ ಕೇರಿಯಲಿರುವ
ಗೆಳತಿಯರ ಜೊತೆಗೂಡಿ
ಮುಗಿದಿಲ್ಲವೇನೇ ನಿನ್ನ ಹರಟೆ.

ಕನವರಿಸೋ ಕನಸುಗಳಿಲ್ಲಾ
ನೀ ಜೊತೆಯಿರದ ದಿನಗಳಲಿ
ಎಲ್ಲಿ ಕಳೆದು ಹೋದೆ ಹೇಳೇ ಸಖಿ.

ಕನ್ನಡಿಯ ಮುಂದೆ ನಿಂತಾಗಲೆಲ್ಲಾ
ನಿನ್ನಾ ಕಿಲಕಿಲ ನಗುವಾ
ನೆನಪಿಸುತಿದೆ ಕನ್ನಡಿಯು ನೋಡೆ ಗೆಳತಿ.

ತುಸು ನಾಚಿ ಕೆಂಪಾಗೋ
ನಿನ್ನಾ ಕೆನ್ನೆಯಲಿ ಮೂಡೋ ಗುಳಿಯೊಂದ
ನಾ ನೋಡಬೇಕು ಬಾ ಗೆಳತಿ.

ಎದೆಗೊರಗಿ ಕಚಗುಳಿಯಿಡುವ
ನಿನ್ನಾ ಬೆರಳುಗಳ ಆಟ
ನಾ ಸವಿಯಬೇಕು ಬಾ ಗೆಳತಿ.

ವಿರಹಗಳ ಮರೆಸಿ
ಸಿಹಿ ನೆನಪುಗಳ ನೀಡುವ
ನಿನ್ನಾ ಸವಿ ಮಾತುಗಳು ಬೇಕು ಬಾ ಗೆಳತಿ.

2 comments:

  1. ಎಲ್ಲೋ ಕೊಂಡು ಹೋಗಿ ನಿಲ್ಲಿಸಿ ಬಿಡುವ ಕವನ.
    ಸಾದೃಶತೆ ಮೆರೆಯುವ ಸಾಲುಗಳು:
    ’ತುಸು ನಾಚಿ ಕೆಂಪಾಗೋ
    ನಿನ್ನಾ ಕೆನ್ನೆಯಲಿ ಮೂಡೋ ಗುಳಿಯೊಂದ
    ನಾ ನೋಡಬೇಕು ಬಾ ಗೆಳತಿ.’

    ReplyDelete