ಜ್ಞಾನದ ಜ್ಯೋತಿಯ ಆಗರವೇ
ವಿನಯಕೆ ನೀನೇ ಸಾಗರವೂ,
ತ್ರಿಮೂರ್ತಿ ರೂಪೇ ಗುರುದೇವಾ
ನಿನ್ನಯ ಚರಣಕಮಲಗಳಿಗಿದೋ ನಮನ.
ಬುದ್ಧಿಯ ತಿದ್ದಿದ ಕಲೆಗಾರ
ವಿಧೇಯತೆ ಬೆಳೆಸಿದ ಗೆಣೆಕಾರ,
ಗುರಿಯನು ತೋರಿದ ನಾಯಕನೇ
ನಮೋ ನಮೋ ಓ ಗುರುದೇವಾ.
ಕಿಚ್ಚಿನ ಕಿಡಿಯನು ಹೊತ್ತಿಸಿದೆ
ಅರಿವಿನ ದೀಪವ ಬೆಳಗಿಸಿದೆ,
ಮಮತೆಯಿಂದಲೇ ನೀ ಹರಸಿದೆ
ನಮಿಸುವೆ ನಿನಗೆ ಓ ಆಚಾರ್ಯ.
ಮಣ್ಣಿನ ಮುದ್ದೆಯ ಮೂರ್ತಿಯಾಗಿಸಿದೆ
ಚೈತನ್ಯವ ತುಂಬಿದೆ ಜೀವನಕೆ,
ನಿಜ ಭಕ್ತಿಯ ಭಾವವ ಮೂಡಿಸಿದಾ
ಶ್ರೀಗುರುವೇ ನಿನಗೆ ವಂದಿಪೆನು.
ಜೀವನ ಪಾಠವ ಭೋಧಿಸಿದೆ
ಪ್ರೀತಿಯಲೇ ಜಗವ ತೋರಿಸಿದೆ,
ಮನುಕುಲ ಬೆಳಗುವ ಸದ್ಗುಣಧಾಮ
ನಮಿಪೆನು ನಿನಗೆ ಓ ಗುರುದೇವಾ.
’ಮಣ್ಣಿನ ಮುದ್ದೆಯ ಮೂರ್ತಿಯಾಗಿಸಿದೆ’ ಎನ್ನುವುದು ನನ್ನಂತಹವರ ಮಟ್ಟಿಗೆ ಸರಿಯಾದ ವಿಶ್ಲೇಷಣೆ.
ReplyDeletethank u...
Delete