22 March, 2015

ಒಲವೊಂದೇ ಸಾಕು...


ಕಾರಣವಿನ್ನೂ ಬೇಕಿಲ್ಲಾ ಹುಡುಗಿ
ನಿನ್ನಾ ಮುಗ್ಧತೆಯೊಂದೇ ಸಾಕಲ್ಲ,
ಮನಸು ಮಿಡಿಯೋಕೆ, ತಕಧಿಮಿ ಕುಣಿಯೋಕೆ
ಕನಸು ಕಾಣೋಕೆ,ಒಲವು ಮೂಡೋಕೆ.
ಮಾತುಗಳಿನ್ನೂ ಬೇಕಿಲ್ಲಾ
ನಿನ್ನ ಮೌನದ ಪರಿಯಾ ನೋಡೋಕೆ,
ಮನಸು ಒಂದೇ ಸಾಕಿನ್ನೂ ನೂರು ಭಾವ ಮೂಡೋಕೆ
ನಿನ್ನ ಪ್ರೀತಿ ಮಾಡೋಕೆ,ಪ್ರೀತಿ ಅಂದ ಸವಿಯೋಕೆ.
ಚಂದದ ಹೂಗಳು ಬೇಕಿಲ್ಲಾ ಮಂತ್ರಮುಗ್ಧಗೊಳಿಸೋಕೆ
ನಿನ್ನ ನಗುವ ಪರಿಯೇ ಸಾಕಿನ್ನೂ,
ಜಗವ ಮರೆಸೋಕೆ,ಕನಸ ಮೆರೆಸೋಕೆ
ಒಲವ ತೊಟ್ಟಿಲಲಿ ಜಗವ ತೂಗೋಕೆ.
ತಂಗಾಳಿಯ ತಂಪು ಬೇಕಿಲ್ಲಾ ಮನಕೆ ಮುದವ ನೀಡೋಕೆ
ನಿನ್ನ ಮುಂಗುರುಳೇ ಸಾಕಿನ್ನೂ ನನ್ನೆದೆಗೆ ಕಚಗುಳಿಯಿಡೋಕೆ,
ನಿನ್ನ ಬಿಸಿಯುಸಿರ ಬುಗ್ಗೆಯೆಬೇಕು
ನನ್ನೆದೆಯಾ ತಣಿಸೋಕೆ,ಪ್ರೀತಿಯಲಿ ಜಗವ ಮರೆಸೋಕೆ.
ಮುಂಗಾರು ಮಳೆಯದುವೇ ಬೇಕಿಲ್ಲಾ ನಾ ತೋಯ್ದುಬಿಡಲು
ಪ್ರೀತಿಯ ಮುತ್ತದುವೇ ಸಾಕಿನ್ನು ನಾ ನೆನೆಯಲು
ನಿನ್ನ ಒಲವೆಂದೂ ಬೇಕು ನಾ ಪ್ರೇಮಿಯಾಗಿರಲು
ಜೊತೆಯೆಂದೂ ನೀನೇ ಬೇಕು ನಾ ಕನಸು ಕಾಣಲೂ...

2 comments:

  1. ಎಂತಹ ಅಮಿತ ಪ್ರೇಮಿ.
    ಕೇಳಿಸಿತೇ ತಮಗೆ ಓ ಕಾವ್ಯ ಕನ್ನಿಕೆ!

    ReplyDelete