ಭಾವಗಳು ಬರಿದಾಗಿ ಮಾತುಗಳು ಮರೆತು
ಬರೆಯೋಕು ಬರದೆ ಮೌನಿಯಾದೆ ನಾನು,
ಪ್ರೀತಿಯಲಿ ನೀನು ನನ್ನಾವರಿಸಿದಾಕ್ಷಣ
ಇದು ಎಂಥಾ ಮಾಯೆಯೋ ಓ ಹುಡುಗಿ.
ಬರೀಯ ಕತ್ತಲೆಯೇ ಇಲ್ಲಿ ಕನಸುಗಳು ಇಲ್ಲಾ
ಮನದ ಮೂಲೆಯಲ್ಲೆಲ್ಲಾ ನಿನ್ನ ನೆನಪುಗಳು ತುಂಬಿ,
ಯಾಕೆ ಹೀಗಾಯ್ತು ನಿನ್ನ ಕಂಡಾಕ್ಷಣ
ಮನಸ ಚಂದ್ರಿಕೆಯೇ ಗ್ರಹಣ ಹಿಡಿದಂತಿದೆಯಲ್ಲೇ.
ಕಲಿಯಬೇಕು ನಾನು ಪ್ರೀತಿ ಪಾಠ
ಭಾವಗಳ ಬೆರೆಸಿ ನಿನ್ನ ಮನಸ ಜೊತೆಗೆ,
ದೂರದಿ ನಿಂತು ನಕ್ಕು ಹಂಗಿಸಬೇಡ
ಸನಿಹಕೆ ಬಂದು ಹೊಸ ಕನಸೊಂದ ಸೃಷ್ಟಿಸು ಹುಡುಗಿ.
ಪ್ರೀತಿಯಲಿ ಎಲ್ಲಾ ಬಲ್ಲವರು ಇಲ್ಲಾ
ಎಲ್ಲವನು ಮರೆಸೋ ಪ್ರೀತಿ ಮಾಯೆಯಲ್ಲ,
ಹೃದಯದಲಿ ಹೊಸ ಕನಸೊಂದ ತುಂಬು
ಅದಕೆ ಬೇಕಿದೆ ನಿನ್ನ ಒಲವು ಎಂದೂ.
ಮನಸ ಕತ್ತಲೆಯ ಸರಿಸು ನಿನ್ನಾ ನಗುವಿನಿಂದಾ
ಆವರಿಸು ಪ್ರೀತಿಯಲಿ ನನ್ನ ತುಂಬಾ,
ಕನಸುಗಳು ಬೇಕು ನಿನ್ನೊಲವ ಜೊತೆಗೆ
ಪ್ರೀತಿಸಲು ಬೇಕು ನಿನ್ನ ಜೊತೆಯಂದೂ ನನಗೆ...
ಪ್ರೀತಿಯೂ ಅಸಲು ತಮತೋಮ ಜೋತಿರ್ಗಮಯವೇ ನಿಜ ನಿಜ...
ReplyDeletethank u badari sir...
ReplyDelete