ಲೋಕದ ಡೊಂಕು ತಿದ್ದುವ ಮೊದಲು
ತಿದ್ದಿಕೋ ನಿನ್ನಾ ಓ ಮನುಜಾ,
ಕೆಡುಕಿಹುದು ನಿನ್ನಾ ಮನಸೊಳಗೆ
ಅರಿತುಕೋ ನೀ ಮೂಡ ಮನವೇ.
ನಾಣ್ಯಕೆ ಎರಡು ಮುಖವುಂಟು
ಸತ್ಯಕೂ ಅದರದೇ ಬಿಂಬವಿದೆ,
ನೀತಿಯ ಹೇಳೋ ಓ ಮನುಜಾ
ಯೋಚಿಸು ನೀನು ಎಡ ಬಲಗಳಲಿ.
ಪ್ರತಿ ಕೆಲಸದಿ ತಪ್ಪು ಇಹುದಿಲ್ಲಿ
ಬರೀಯ ತಪ್ಪನೇ ಹುಡುಕುವೆ ನೀ ಏಕಿಲ್ಲಿ,
ನೋಡುವ ಕಣ್ಣಲೇ ಪೂರ್ವಾಗ್ರಹವಿರಲು
ತಿಳಿಯದು ಎಂದೂ ನಿಜ ಸಂಗತಿಯೂ.
ಮೆರೆಯದಿರೂ ನೀ ಶ್ರೇಷ್ಟತೆಯಾ ಗುಂಗಿನಲಿ
ಸತ್ಯವ ಅರಿಯದೆ ಅಜ್ಞಾನಿಯಾಗದಿರು,
ಸಮರಸದಲಿ ಜೀವನವುಂಟು
ಕೆಡಿಸದಿರು ನೀ ಲೋಕದ ಶಾಂತಿಯನು.
ಹರಡದಿರು ಅಜ್ಞಾನದ ಕತ್ತಲೆಯಾ
ಸಾಧ್ಯವಾದರೆ ಬೆಳಗು ಜ್ಞಾನದ ಜ್ಯೋತಿಯನು,
ಬದಲಾಯಿಸು ನಿನ್ನಯ ನೋಟವನು
ಈ ಲೊಕವು ಸುಂದರ ತಾಣವು ನಿನಗಿಲ್ಲಿ.
No comments:
Post a Comment