30 October, 2015

ಪ್ರೀತಿನೇ ಎಲ್ಲಾ...ಪ್ರೀತಿಯೊಳಗೆ ಬೇವು ಬೆಲ್ಲ...


ಪ್ರೀತಿಯಲಿ ನೂರಾರು ನೆನಪಿದೆ
ಆ ನೆನಪಲಿ ಮನಸು ಮೈ ಮರೆತಿದೆ,
ಪ್ರೀತಿಗೆ ಸ್ನೇಹದಾ ನೆಪವಿದೆ
ನೆಪವಿಲ್ಲಿ ಸಂಭಂದವ ಹುಡುಕಿದೆ.

ಪ್ರೀತಿಗೂ ಒಂದು ಹೆಸರಿದೆ
ಆ ಹೆಸರ ಮನಸಿಲ್ಲಿ ಹುಡುಕಿದೆ,
ಪ್ರೀತಿಯಲೂ ಒಂದು ಬದುಕಿದೆ
ಆ ಬದುಕ ತುಂಬೆಲ್ಲಾ ನೂರು ಕನಸಿದೆ.

ಭೂಮಿಗೂ ಗಡಿಯಂಚಿನ ಹಂಗಿದೆ
ಪ್ರೀತಿಯಿಲ್ಲಿ ಗಡಿಯ ಮೇರೆಮೀರಿದೆ,
ಭಾಷೆಗೂ ಭಾವದಾ ಹಂಗಿದೆ
ಪ್ರೀತಿಯದು ಭಾಷೆಯಾ ಮರೆಸಿದೆ.

ಓಡೋ ಕಾಲಕೂ ತನ್ನದೆ ಸೂತ್ರವಿದೆ
ಪ್ರೀತಿಯಿದು ಕಾಲವನೇ ಬಂಧಿಸಿದೆ,
ನೋವಿಗೂ ಇಲ್ಲಿ ಔಷಧಿಯು ದೊರಕಿದೆ
ಪ್ರೀತಿಯಿಲ್ಲಿ ಮಾಯೆಯಾಗಿ ತಬ್ಬಿದೆ.

ಸೃಷ್ಟಿಗೂ ಸೌಂದರ್ಯದ ಮರುಳಿದೆ
ಪ್ರೀತಿಯೊಳು ರೂಪವೂ ಅಂಧವಾಗಿದೆ,
ಖುಷಿಗೊಂದು ಕಾರಣವು ಬೇಕಿದೆ
ಅದಕ್ಕಾಗೆ ಪ್ರೀತಿ ಭೂಮಿ ಮೇಲಿದೆ.


No comments:

Post a Comment